ಕೊರ್ಜೆಟ್(ಜುಕುನಿ )ರಸಪಲ್ಲೇ.
ಕೊರ್ಜೆಟ್ ಅಥವಾ ಜ್ಹುಕುನಿ ಎಂಬುದು ಬೇಸಿಗೆಯಲ್ಲಿ ಬೆಳೆಯುವ ಒಂದು ಬಳ್ಳಿ ತರಕಾರಿ ,ಇದು ಸೌತೆಯ ಹೈಬ್ರೀಡ್ ತಳಿಯು ಹೌದು.ಮೂಲತಃ ಅಮೇರಿಕಾದ ತರಕರಿಯಾದರು ಇದು ಸಾಕಷ್ಟು ಜನಪ್ರಿಯತೆ ಪಡೆದಿದ್ದು ಇಟಲಿ ಯಲ್ಲಿ ,ಕಡಿಮೆ ಕ್ಯಾಲೋರಿ ಇರುವುದರಿಂದ ಡಯಟ್ ಪ್ರಿಯರ ಮೆಚ್ಹಿನ ತರಕಾರಿ ಇದಾಗಿದೆ )
ಬೇಕಾಗುವ ಪದಾರ್ಥಗಳು
೨ ರಿಂದ ೩ ಜುಕುನಿ
೧/೨ ಕಪ್ ಕಡಲೆಬೇಳೆ (ನೀರಿನಲ್ಲಿ ನೆನೆಸಿದ್ದು )
೧ ಚಮಚ ಬೆಳ್ಳುಳ್ಳಿ ಶುಂಟಿ ಪೇಸ್ಟ್
೨ ಈರುಳ್ಳಿ
೨ ಹದ ಗಾತ್ರದ ಟೊಮೇಟೊ
೧/೨ ಚಮಚ ಕಿಚನ್ ಕಿಂಗ್ ಮಸಾಲೆ
೧.೧/೨ ಚಮಚೆ ಕೆಂಪು ಮೆಣಸಿನ ಪುಡಿ.
೧/೨ ಚಮಚೆ ಜೀರಿಗೆ
೪ ಚಮಚ ಎಣ್ಣೆ.
ಮಾಡುವ ವಿಧಾನ -
೧.ಜುಕುನಿಯನ್ನು ಹದ ಗಾತ್ರದ ಹೋಳುಗಳಾಗಿ ಹೆಚ್ಚಿಕೊಳ್ಳಿ.
೨ ,ಈರುಳ್ಳಿ ಮತ್ತು ಟೊಮೇಟೊ ವನ್ನು ಸಣ್ಣದಾಗಿ ಹೆಚ್ಚಿ ಕೊಳ್ಳಿ
೩. ಬಾಣಲೆ ಅಥವಾ ಪ್ರೆಶರ್ ಕುಕ್ಕರಿನಲ್ಲಿ ಎಣ್ಣೆ ಬಿಸಿಗಿಟ್ಟು ಜೀರಿಗೆ ಹಾಕಿ.
೪,ಜೀರಿಗೆ ಕೆಂಪಗಾದ ನಂತರ ಈರುಳ್ಳಿ,ಶುಂಟಿ ,ಬೆಲ್ಲುಲ್ಲು ಪೇಸ್ಟ್ ಹಾಕಿ ಘಮ ಬರುವ ತನಕ ಹುರಿಯಿರಿ
೫,ಜುಕುನಿ ಮತ್ತು ಕಡಲೆಬೇಳೆ ಯನ್ನು ಬಾಣಲೆಗೆ ಹಾಕಿ..ಕೈಯ್ಯಾಡಿಸಿ.
೬.ಕೆಂಪು ಮೆಣಸಿನ ಪುಡಿ,ಕಿಚನ್ ಕಿಂಗ್ ಮಸಾಲೆ,ಮತ್ತು ಟೊಮೇಟೊ ಸೇರಿಸಿ.ಸ್ವಲ್ಪ ನೀರನ್ನೂ ಸೇರಿಸಿ
೭,ಕೊನೆಯಲ್ಲಿ ಉಪ್ಪು ಸೇರಿಸಿ.೨ ವಿಸಿಲ್ ತರಿಸಿ.ಅಥವಾ ಕಡಲೆ ಬೇಳೆ ಬೇಯುವ ತನಕ ಉರಿಯನ್ನು ಆರಿಸಬೇಡಿ.
ಈಗ ರಸಪಲ್ಲೇ ಸಿದ್ಧ .ಇದು ಬಿಸಿ ಅನ್ನದೊಂದಿಗೆ ಒಳ್ಳೆಯ ಜೊತೆ.ಹಾಗೆ ಚಪಾತಿ ಒಡನೆಯೂ ರುಚಿಸುತ್ತದೆ.
ಜುಕುನಿ ಬದಲು ಸೌತೆ ಕಾಯಿ,ಹೀರೆ ಕಾಯಿ ,ತುಪ್ಪೀರೆ ಕಾಯಿ ,ಮೊಗೆ ಕಾಯಿ ಗಳನ್ನು ರಸವತ್ತಾದ ರಸಪಲ್ಲೆಗೆ ಬಳಸ ಬಹುದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ