೩.ಬೇಬಿ ಕ್ಯಾಬೇಜ್ ತುಂಬುಗಾಯಿ
(Brussels sprouts ಎಂದು ಕರೆಯಲ್ಪಡುವ ಈ ತರಕಾರಿ ಕಾಡು ಕ್ಯಾಬೇಜ್ ಕೂಡ ಹೌದು.ರುಚಿಯಲ್ಲೂ ಕ್ಯಾಬೇಜ್ ನ್ನೇ ಹೋಲುತ್ತದೆ.ಮತ್ತು ರೂಪದಲ್ಲೂ ಸಾಮ್ಯತೆ ಇರುವುದರಿಂದ ಇದನ್ನು ಬೇಬಿ ಕ್ಯಾಬೇಜ್ ಅನ್ನುವುದೇ ಸೂಕ್ತ .ಇದು ಬೆಲ್ಜಿಯಂ ದೇಶದ ತರಕಾರಿ ,ಕ್ಯಾನ್ಸೆರ್ ರೋಗವನ್ನು ತಡೆಯುವ ಶಕ್ತಿಯನ್ನು ಈ ತರಕಾರಿ ಹೊಂದಿದೆ. ತುಂಬಾ ಸುಲಭ ವಾಗಿ ಬೇಯುತ್ತದೆ ಆದ್ದರಿಂದ.ಇದನ್ನು ಹಾಗೆ ಬೇಯಿಸಿ ,ಗ್ರಿಲ್ ಮಾಡಿ ಇಲ್ಲಿಜ ಜನ ಇದನ್ನು ಸೇವಿಸುತ್ತಾರೆ )
ಬೇಕಾಗುವ ಪದಾರ್ಥ.
೧/೨ ಕೆ ಜಿ ಬೇಬಿ ಕ್ಯಾಬೇಜ್
೨ ಈರುಳ್ಳಿ
೧/೨ ಬಟ್ಟಲು ಒಣಕೊಬ್ಬರಿ ಅಥವಾ ಹಸಿ ಕ್ಹೊಬ್ಬರಿ ತುರಿ
೧/೪ ಬಟ್ಟಲು ಶೇಂಗ ಪುಡಿ (ಹುರಿದು ಪುಡಿಮಾಡಿದ್ದು)
೨ ಚಮಚ ಸಾಂಬಾರ್ ಪುಡಿ/ಗರಂ ಮಸಾಲ
೪ ಚಮಚ ಕೆಂಪು ಮೆಣಸಿನ ಪುಡಿ
ರುಚಿಗೆ ಬೆಲ್ಲ ,ಉಪ್ಪು ,ಮತ್ತು ಹುಣಸೆ ರಸ
ಒಗ್ಗರಣೆಗೆ -ಉದ್ದಿನ ಬೇಳೆ ,ಸಾಸಿವೆ ಕರಿಬೇವು, ಎಣ್ಣೆ
ಮಾಡುವ ವಿಧಾನ -
೧.ಪುಟ್ಟ ಕ್ಯಾಬೇಜ್ ಗಳನ್ನು ನಾಲ್ಕು ಭಾಗಗಳಾಗಿ ಸೀಳು ಮಾಡಿ ನೀರಿನಲ್ಲಿ ಹಾಕಿಡಿ
೨.ಏರುಲ್ಲಿಯನ್ನು ಸಣ್ಣಗೆ ಹೆಚ್ಚಿಕೊಳ್ಳಿ
3.ಕೊಬ್ಬರಿ ,ಶೇಂಗ ಪುಡಿ ,ಗರಂ ಮಸಾಲೆ ,ಮೆಣಸಿನ ಪುಡಿ ಬೆಲ್ಲ ,ಉಪ್ಪು.ಹುಣಸೆರಸ ಇವನ್ನು ಹೆಚ್ಚಿದ ಈರುಳ್ಳಿಯೊಂದಿಗೆ ಚನ್ನಾಗಿ ಕಲಸಿ ಒಂದು ಮಸಾಲೆ ಸಿದ್ದಮಾಡಿ ಕೊಳ್ಳಿ.
೪ .ನೀರಲ್ಲಿ ಹಾಕಿಟ್ಟ ಬೇಬಿ ಕ್ಯಾಬೇಜ್ ಗಳ ಮಧ್ಯ ಈ ಮಸಾಲೆಯನ್ನು ತುಂಬಿ ,
೫.ಬಾಣಲೆಯಲ್ಲಿ ಎಣ್ಣೆ ಹಾಕಿ ಉದ್ದಿನ ಬೇಳೆ,ಸಾಸಿವೆ ,ಕರಿಬೇವುಗಳನ್ನು ಒಗ್ಗರಣೆ ಮಾಡಿಕೊಂಡು.ಅದರಲ್ಲಿ ತುಂಬಿದ ಬೇಬಿ ಕ್ಯಾಬೇಜ್ ಗಳನ್ನು ಮೇಲ್ಮುಖವಾಗಿ ಇಡುತ್ತ ಹೋಗಿ.
೬.ಮಸಾಲೆಯಲ್ಲಿ ಉಪ್ಪು ಹಾಕಿರುವುದರಿಂದ.ಕ್ಯಾಬೇಜ್ ನ ಹೊರ ಆವರಣಕ್ಕೆ ಬೇಕಾಗುವ ಸ್ವಲ್ಪ ಪ್ರಮಾಣದ ಉಪ್ಪು ಹಾಕಿ.ಬಾಣಲೆಯನ್ನು ಮುಚ್ಚಿ ಸಣ್ಣ ಉರಿಯಲ್ಲಿ ೧೫ ರಿಂದ ೨೦ ನಿಮಿಷ ಬೇಯಿಸಿ.
ರುಚಿ ರುಚಿ ಬ್ರುಸ್ಸೇಲ್ ಸ್ಪ್ರೋಟ್ಸ (ಬೇಬಿ ಕ್ಯಾಬೇಜ್) ತುಂಬುಗಾಯಿ ಸಿದ್ಧ ,ಇದನ್ನು ರೊಟ್ಟಿ/ ಚಪಾತಿಗಳಿಗೆ ಇದು ಒಳ್ಳೆಯ ಸಂಗಾತಿ .
ತುಂಬುಗಾಯಿ ಮಾಡಲು ಎಲೆ ಬದನೇಕಾಯಿ,ಹಾಗಲ ಕಾಯಿ,ಹೀರೆಕಾಯಿ,ಗಳನ್ನು ಬಳಸಬಹುದು..ತರಕಾರಿ ಬದಲಾದಂತೆ ರುಚಿಯು ಕೊಂಚ ಬದಲಾಗುತ್ತದೆ ಹಾಗಲಕಾಯಿ ತುಮ್ಬುಗಾಯಿಗೆ ಬೆಲ್ಲ ಸ್ವಲ್ಪ ಜಾಸ್ತಿ ಹಿಡುಯುತ್ತದೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ