೧.ಕೀವಿ ಹಣ್ಣಿನ ಗೊಜ್ಜು.
(ಕೀವಿ ಹಣ್ಣನ್ನು ಚೈನೀಸ್ ಗೂಸ್ ಬೆರ್ರಿ ಎಂದು ಕರೆಯುತ್ತಾರೆ, ಇದನ್ನು New Zealand ನಲ್ಲಿ ದಾಖಲೆಯ ಪ್ರಮಾಣದಲ್ಲಿ ಬೆಳೆಯುತ್ತಾರೆ ಆದ್ದರಿಂದ ಅಲ್ಲಿನ ರಾಷ್ಟ್ರೀಯ ಪಕ್ಷಿ ಕೀವಿ ಹೆಸರನ್ನು ಈ ಹಣ್ಣಿಗು ಇಡಲಾಯಿತು.ವಿಟಮಿನ್ ಸಿ ಮತ್ತು ಹಲವು ಪೋಷಕಾಂಶಗಳನ್ನು ಹೊಂದಿರುವ ಹಸಿರು ಹಣ್ಣು ಇದಾಗಿದೆ.)
ಬೇಕಾಗುವ ಪದಾರ್ಥ ಗಳು
೨ ಕೀವಿ ಹಣ್ಣುಗಳು
೧ ಹಸಿಮೆಣಸು
ಕೊತ್ತಂಬರಿ ಸೊಪ್ಪು ಸ್ವಲ್ಪ
ಚಿಟಿಕೆ ಇಂಗು
ಉಪ್ಪು,ಬೆಲ್ಲ ರುಚಿಗೆ
ಒಗ್ಗರಣೆಗೆ ;ಸಾಸಿವೆ ,ಕರಿಬೇವು ,ಒಣಮೆಣಸು
ಮಾಡುವ ವಿಧಾನ-
೧.ಕೀವಿ ಹಣ್ಣ ನ್ನು ಸಿಪ್ಪೆಯಿಂದ ಬೇರ್ಪಡಿಕೊಳ್ಳಿ.
೨.ಬೆಲ್ಲ ಉಪ್ಪು ,ಹಸಿಮೆಣಸು ,ಇಂಗು ಇವನ್ನು ಒಂದು ಪಾತ್ರೆಯಲ್ಲಿ ಚನ್ನಾಗಿ ಕಲಿಸಿಕೊಳ್ಳಿ .
೩.ಇದಕ್ಕೆ ಕೀವಿ ಹಣ್ಣಿನ ತಿರುಳು ಸೇರಿಸಿ.ಚನ್ನಾಗಿ ಕಿವುಚಿ ,
೪.ಕರಿಬೇವು ಸಾಸಿವೆ ,ಒಣಮೆಣಸಿನ ಚೂರಿನೊಂದಿಗೆ ಒಗ್ಗರಣೆ ಕೊಡಿ.ಸಿಹಿಹುಳಿ ಕೀವಿ ಹಣ್ಣಿನ ಗೊಜ್ಜು ಸಿದ್ದ.
(ನೆನಪಿಡಿ -ಈ ಗೊಜ್ಜು ಮಾಡುವಾಗ ಮಿಕ್ಸರ್ ಅಥವಾ ಬ್ಲೆನ್ದೆರ್ ಬಳಸಬೇಡಿ.ಕೀವಿ ಹಣ್ಣನ್ನು ರುಬ್ಬಿದರೆ ಅದರ ರುಚಿ ಬದಲಾವಣೆ ಗೊಳ್ಳುತ್ತದೆ..)
ಹಣ್ಣುಗಳ ರಾಜ ಮಾವು,ಮತ್ತು ಹುಣಸೆ ಹಣ್ಣು , ಬಿಂಬಲ್,ಕಮರಾಕ್ಷಿ ,ದ್ರಾಕ್ಷಿ ... ಹುಳಿ ಸಿಹಿ ರುಚಿ ಇರುವ ಎಲ್ಲಾ ಹಣ್ಣಿ ನಲ್ಲಿ ಈ ರುಚಿಯನ್ನು ನೀವು ಪ್ರಯೋಗಿಸಬಹುದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ