ಬುಧವಾರ, ಫೆಬ್ರವರಿ 1, 2012

ಪಾಲ್ ಚಾಕ್

ಪರದೇಶದಲ್ಲಿ  ಭಾರತೀಯರ ವಾರಾಂತ್ಯ  ಗಳಿಗೆ ಅದರದೇ ಆದ ಒಂದು ಚಂದ ಇದೆ..ಬೇರೆಯಾವ ಮನರಂಜನೆ ಇರದ ಕಾರಣ ಪರಸ್ಪರರ ಮನೆಗೆ ಹೋಗುವುದು ಮತ್ತು ಜೊತೆಗೂಡಿ ಊಟ ಮಾಡುವುದು ನಮ್ಮ ಆದ್ಯತೆಗಳಲ್ಲಿ ಒಂದು..ಈಗೀಗ ಅದೆಷ್ಟು ಅಭ್ಯಾಸ ಆಗಿದೆ ಅಂದ್ರೆ ಶುಕ್ರವಾರ ಯಾರ ಕಾಲ್ ,ಇನ್ವಿಟೇಶನ್ ಬರ್ಲಿಲ್ಲ  ಅಂದ್ರೆ ಏನೋ ತಪ್ಪಿದ ಹಾಗೆ ನಮ್ಮ ಮನೆಗೆ ಕರೆಯಲಿಲ್ಲವಲ್ಲ ಅನ್ನೋ ಕಿಟಿ ಪಿಟಿ ಬೇರೆ ,ಹಾಗೆ ಪರನಾಡಿನ ತಾಯಿನೆಲದ  ಸ್ನೇಹಿತರ ಮನೆಗೆ ಉಟಕ್ಕೆ ಹೋದಾಗ ಸವಿದ ರುಚಿಗಳನ್ನು ನಾನೂ ಮನೆಗೆ ಬಂದು ಪ್ರಯತ್ನಿಸುತ್ತೇನೆ..ಹಾಗೆ ನಾ ತುಂಬಾ ಇಷ್ಟಾ ಪಟ್ಟು ಸವಿದ ಮತ್ತು ಮಾಡಿದ ಸಿಹಿ ಇದು ,
ಓಡಿಸ್ಸಾದ ಕೆಲವು ಭಾಗಗಳಲ್ಲಿ ಈ ಸಿಹಿ ತುಂಬಾ ಪ್ರಸಿದ್ಧ ,ಕಡಿಮೆ ಸಿಹಿ ಇರುವುದರಿಂದ ಸಿಹಿ ಆಗದವರಿಗೂ  ಇದು ಇಷ್ಟಾ ಆಗುತ್ತೆ.ತುಂಬಾ ಸರಳ ,ಮಲೆನಾಡು ಕರಾವಳಿಯಲ್ಲಿ ಕಾಯಿ ಹಾಲು ಅಕ್ಕಿ,ರಾಗಿ,ಕುವೆ ಹಿಟ್ಟು ಗಳಿಂದ ಮಾಡುವ ಹಾಲುಬಾಯಿ ಯಂತೆ ಕಾಣುವ ಇದರ ಹೆಸರು ಪಾಲ್ ಚಾಕ್ ,

ಬೇಕಾಗುವ ಸಾಮಗ್ರಿಗಳು 
೧/೨ ಲಿಟರ್ ಹಾಲು 
ಒಂದು ಹಿಡಿ ಅಕ್ಕಿ 
೨೫೦ ಗ್ರಾಂ ಸಕ್ಕರೆ 
ತೇಜ್ ಪತ್ತಾ,
ಕ್ಹೊಬ್ಬರಿ ಚೂರುಗಳು 


ಮಾಡುವ ವಿಧಾನ .
೧.ಅಕ್ಕಿಯನ್ನು ರಾತ್ರಿಯೇ ನೆನೆಸಿಡಿ (ಕನಿಷ್ಠ ೫-೬ ಘಂಟೆ )ಮತ್ತು ಮುಂಜಾನೆ ಸಣ್ಣ ದಾಗಿ ರುಬ್ಬಿಕೊಳ್ಳಿ ಇದು ನೀರುದೋಸೆ ಹಿಟ್ಟಿನ ಹದ ಇರಲಿ ,
೨.ಹಾಲನ್ನು ಕಾಯಿಸಲು ಇಡಿ.ಇನ್ನೇನು ಹಾಲು   ಉಕ್ಕಿ ಬರುತ್ತೆ ಅನ್ನುವ ಸಮಯದಲ್ಲಿ ರುಬ್ಬಿಕೊಂಡ ಅಕ್ಕಿಯ ಮಿಶ್ರಣವನ್ನು ಅದಕ್ಕೆ ಹಾಕಿ ಕದಕುತ್ತ ಇರಿ ,ಕೈ ಬಿಟ್ಟರೆ ತಳ ಹಿಡಿಯುವ ಸಂಭವ ಜಾಸ್ತಿ 
೩.೩-೪ ನಿಮಿಷದಲ್ಲಿ ಇದು ಘಟ್ಟಿ ಯಾಗಿ  ಬರುತ್ತದೆ ಆಗ ಸಕ್ಕರೆ ಸೇರಿಸಿ ,ಮತ್ತು ಮಂದ ಉರಿಯಲ್ಲಿ ಸ್ವಲ್ಪ ಸಮಯ ಬೇಯಿಸಿ 
೪,ಈಗ ಕೊಬ್ಬರಿ ಚೂರು ,ಮತ್ತು ತೇಜ್ ಪತ್ತಾ (ದಲ್ಚೀನಿ ಎಲೆ )ಸೇರಿಸಿ..
೫.ತಟ್ಟೆಗೆ ಸುರುವಿ ತಣಿಸಿ , ಹಲ್ವಾ ದಂತೆ ಕತ್ತರಿಸಿ ಸವಿಯಿರಿ.
ಹೀಗೆ ಕತ್ತರಿಸುವುದರಿಂದ ಇದನ್ನು ಪಾಲ್ ಚಾಕ್ ಅನ್ನುತ್ತಾರೆ,ಸುಮ್ಮನೆ ಪಾಯಸ ದಂತೆಯು ಇದನ್ನು ಸವಿಯಬಹುದು ಆಗ ಅದು ಕೇವಲ ಪಾಲ, ಸಮನ್ಯಾವಾಗಿ ಓಡಿಸ್ಸಾ ದಲ್ಲಿ ಉದ್ದಿನ ದೋಸೆಯೊಂದಿಗೆ ಈ ಪಾಕ್ ಚಾಕ್ ಮಾಡುತ್ತಾರಂತೆ.
.ಇಲ್ಲಿ ದಾಲ್ಚೀನಿ ಎಲೆಯ ಮಂದ ಘಮವೇ ಸಿಹಿಯ ಸ್ಟ್ರಾಂಗ್ ಪಾಯಿಂಟ್ ,. ನಾನು ಡಾರ್ಕ್ ಚಾಕ್ಲೆಟ್ ಪುಡಿ ಹಾಕಿ ಗಾರ್ನಿಶ್ ಮಾಡಿದ್ದೇನೆ ,ನೀವು ನಿಮ್ಮ ಅಭಿರುಚಿಗನುಗುಣವಾಗಿ ಸಿಂಗರಿಸಿ..

1 ಕಾಮೆಂಟ್‌:

  1. ಮಾಡುವ ಅಡುಗೆಯನ್ನು ನೀವು ಪರಿಚಯಿಸಿದ ಬಗೆ ತುಂಬಾ ಸುಂದರವೆನಿಸಿತು.. ನಿಮ್ಮಲ್ಲಿರುವ ಒಳ್ಳೆಯ ಅಡುಗೆಯ ಅಭಿರುಚಿಯ ಜೊತೆಗೆ, ಒಬ್ಬ ಒಳ್ಳೆಯ ಬರಹಗಾರ್ತಿಯೂ ಇದ್ದಾರೆ..:))) ವೀಕೆಂಡ್ ಸ್ಪೆಷಲ್ ಗೆ ಈ ಡಿಶ್ ಮಾಡಿಸಬಹುದೆನಿಸುತ್ತದೆ.. ನೋಡುವಾ ನಮ್ಮ ಬಾಯಿ ಸಿಹಿಯಾಗಬಹುದೆನಿಸುತ್ತದೆ, ನಿಮ್ಮನ್ನು ನಂಬಿ ಅಮ್ಮನಲ್ಲಿ ರೆಕಮೆಂಡ್ ಮಾಡ್ತೇನೆ..;)

    ಪ್ರತ್ಯುತ್ತರಅಳಿಸಿ