ಭಾನುವಾರ, ಫೆಬ್ರವರಿ 5, 2012

ಅಂಜಾಕ್ ಬಿಸ್ಕೆಟ್



ಅದು ಮೊದಲ ಮಹಾಯುದ್ಧದ ಸಮಯ ,ಆಸ್ಟ್ರೇಲಿಯನ್ ಸೈನ್ಯದಲ್ಲಿ ಅನ್ಜಕ್ ಟ್ರೂಪ್ ಅನ್ನುವವರು ತಮ್ಮ ಸೈನಿಕರಿಗೆ ತಮ್ಮಲ್ಲಿ ಅಳಿದುಳಿದ ದಿನಸಿಗಳಲ್ಲೇ ರುಚಿಯಾದದದ್ದು ಪೌಷ್ಟಿಕವಾದದ್ದು ಮತ್ತು ತುಂಬಾ ದಿನಗಳ ಕಾಲ ಇರುವಂಥಹ ಬಿಸ್ಕೆಟ್ ಒಂದನ್ನು ತಯಾರಿಸಿದರು.ಕಾಲಕ್ರಮೇಣ ಈ ಬಿಸ್ಕೆಟ್ ಆಸ್ಟ್ರೇಲಿಯಾದ ಜನಪ್ರಿಯ ತಿಂಡಿಯಾಯಿತು.
ಆಸ್ಟ್ರೇಲಿಯದ  ಸೈನಿಕರು ಇಂದಿಗೂ ತಮ್ಮ ಮನೇ ಮಂದಿಯಿಂದ ಉಡುಗೊರೆಯ ರೂಪದಲ್ಲಿ ಈ ಬಿಸ್ಕಿಟ್ ಪಡೆಯುತ್ತಾರೆ ಹಾಲು ,ಮೊಟ್ಟೆ ಗಳಂಥ ವಸ್ತುಗಳು ಬೇಕಾಗಿಲ್ಲ ಆದಕಾರಣ ನಿಶ್ಚಿಂತೆಯಿಂದ ಇದನ್ನು ಪ್ರಯಾಣದಲ್ಲಿ ಒಯ್ಯಬಹುದು .ಈ ರೆಸಿಪೆ ಮತ್ತು ವಿವರಗಳನ್ನು ನನ್ನ ಮಗ ತನ್ನ ಲೈಬ್ರರಿ ಯಿಂದ ತಂದ step by step cooking for kids ಎಂಬ ಪುಸ್ತಕದಿಂದ ಪಡೆದುಕೊಂಡೆ..ತುಂಬಾ ಸರಳ ಮತ್ತು ರುಚಿ ರುಚಿ ,ಮಕ್ಕಳೊಂದಿಗೆ ಮಾಡಬಹುದಾದ ಅಡುಗೆ ಇದು..
ಬೇಕಾಗುವ ಪದಾರ್ಥಗಳು.
೪ ಚಮಚ ಬೆಣ್ಣೆ 
೧ ಟಿ ಚಮಚ ಬೇಕಿಂಗ್ ಪೌಡರ್ 
೨ ಚಮಚ ಕಾರ್ನ್ ಸಿರಪ್ (ಹಸಿ ಮುಸುಕಿನ ಜೋಳವನ್ನು ಮಿಕ್ಸಿ ಮಾಡಿಕೊಂಡು ಬಳಸಬಹುದು )
೧ ಕಪ್ ಮೈದಾ
೧ ಕಪ್ ಓಟ್ಸ್
೧/೪ ಕಪ್ ಸಕ್ಕರೆ 
ಮಾಡುವ ವಿಧಾನ 
೧,ಪಾತ್ರೆಯೊಂದರಲ್ಲಿ ಮೈದಾ ,ಸಕ್ಕರೆ ,ಓಟ್ಸ್ ಮಿಶ್ರ ಮಾಡಿಕೊಳ್ಳಿ 
೨,ಮತ್ತೊಂದು ಪಾತ್ರೆಯಲ್ಲಿ ಬೆಣ್ಣೆಯನ್ನು ಕರಗಿಸಿ ಅದರಲ್ಲಿ ಕಾರ್ನ್ ಸಿರಪ್ ,ಮತ್ತು ಬೇಕಿಂಗ್ ಸೋಡಾ ಬೆರೆಸಿ ಮತ್ತು ಇದನ್ನು ಮೈದಾ ಸಕ್ಕರೆ ಓಟ್ಸ್ ಮಿಶ್ರಣಕ್ಕೆ ಸೇರಿಸಿ ಕಲಿಸಿಕೊಳ್ಳಿ.
೩.ಅಲುಮಿನಿಯಂ ಫಾಯಿಲ್  ಮೇಲೆ ಬೆಣ್ಣೆ ಸವರಿ ,ಕಲಸಿಕೊಂಡ ಮಿಶ್ರಣವನ್ನು ಬಿಸ್ಕಿಟ್ ರೂಪದಲ್ಲಿ  ಇಡಿ,
೪,೧೮೦ ಡಿಗ್ರಿ ತಾಪಮಾನದಲ್ಲಿ ೩೫-೪೦ ನಿಮಿಷ ಬೇಕ್ ಮಾಡಿ ,
ಮತ್ತು ಐತಿಹಾಸಿಕ ಬಿಸ್ಕಿಟ್ ಸವಿಯಿರಿ.

1 ಕಾಮೆಂಟ್‌:

  1. ನಿಮ್ಮ ಲೇಖನಗಳನ್ನು ಈ ಹಿಂದೆಯೂ ಓದಿ ಮನಸ್ಸಿಗೆ ಹಚ್ಚಿಕೊಂಡಿದ್ದೆ. ಏಕೆಂದರೆ ಅಲ್ಲಿ, ಮನಸ್ಸು ತೆರೆದು ಮಾತಾಡುವುದನ್ನು ಕೇಳುವ ಹೆಮ್ಮನಸ್ಸಿನ ಧ್ವನಿ ಆಲಿಸಿದ್ದೆ. ಅದು ನನ್ನ ತಾಯಿ ಮಾತಾಡಿದಂತೆ. ಅಡುಗೆ ಮಾಡುವಾಗ ಉಪ್ಪಿಲ್ಲದಿದ್ದರೆ ಮಗು ಜಗಳ ಮಾಡಿದಂತೆ. ಸಿಟ್ಟಿನಲ್ಲಿ ಕೆಲವೊಮ್ಮೆ ಊಟದ ತಟ್ಟೆ ಸದ್ದಾಗುತ್ತದೆ. ತೊಟ್ಟ ಕೈಬಳೆಗಳು ಝಣಗುಟ್ಟಿಸುತ್ತವೆ. ನಿಮ್ಮ ಭಾವದ ಪದಗಳು ಶ್ರೇಷ್ಠ ತಾಯಿ. ನನ್ನ ತಾಯಿ ಈಗಲೂ ನೆನಪಾಗುತ್ತಾಳೆ. ನಿಮಗೆ ನನ್ನ ವಂದನೆಗಳು.

    ಪ್ರತ್ಯುತ್ತರಅಳಿಸಿ